ನಾಡಿನ ಧೀಮಂತ ನಾಯಕ, ಅಜಾತಶತ್ರು ಶ್ರೀ ಅನಂತಕುಮಾರರು ದಿ. 12-11-2018ರಂದು ಭೌತಿಕವಾಗಿ ನಮ್ಮಿಂದ ದೂರವಾಗಿ 5 ವರುಷಗಳು ಸಂದಿವೆ. ಮುತ್ಸದ್ಧಿ ಶ್ರೀ ಅನಂತಕುಮಾರರ ಪುಣ್ಯತಿಥಿಯ ಸ್ಮರಣಾರ್ಥ ಅದಮ್ಯ ಚೇತನ ಹಾಗೂ ಅನಂತಕುಮಾರ್ ಪ್ರತಿಷ್ಠಾನದ ಸಹಯೋಗದಲ್ಲಿ ʻಅನಂತ ಸ್ಮೃತಿ ನಡಿಗೆʼ ಶೀರ್ಷಿಕೆಯಡಿ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ. ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಗೌರವಿಸುತ್ತಾ ಬಂದ ಎಲ್ಲ ಮಹಾಪುರುಷರನ್ನು ಸ್ಮರಿಸುತ್ತಾ ʻಅನಂತ ಸ್ಮೃತಿ ನಡಿಗೆʼಯನ್ನು ಯಶಸ್ವಿಗೊಳಿಸೋಣ, ಬನ್ನಿ!
ದಿನಾಂಕ : 12 ನವಂಬರ್ 2023
ಸಮಯ: ಸಂಜೆ 5:00 ಗಂಟೆಗೆ
ಸ್ಥಳ; ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಅದಮ್ಯಚೇತನ ದವರೆಗೆ